ನಮ್ಮ ಬಗ್ಗೆ

ಆಡಳಿತ

ಶೈಕ್ಷಣಿಕ

ಕಾರ್ಯಕ್ರಮಗಳು

ಸೌಲಭ್ಯಗಳು

ವಿದ್ಯಾರ್ಥಿಗಳ ವಲಯ

ವಿದ್ಯಾರ್ಥಿ ಕಲ್ಯಾಣ ವಿಭಾಗ

ವಿಭಾಗದ ಬಗ್ಗೆ

ಕಲಿಕಾರ್ಥಿಗಳ ಸಹಾಯ ಸೇವೆಗಳು ವಿಶ್ವವಿದ್ಯಾನಿಲಯದ ಬಹಳ ಪ್ರಮುಖವಾದ ಅಂಗವಾಗಿದೆ. ಇದು ವಿಸ್ತøತವಾದ ಶೈಕ್ಷಣಿಕ, ಮೌಲ್ಯಮಾಪನ, ವಿಸ್ತರಣೆ ಮತ್ತು ಇತರೆ ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಬೆಂಬಲದ ಸೇವೆಗಳು ದೂರ ಶಿಕ್ಷಣಾರ್ಥಿಗಳ ಅವಶ್ಯಕತೆಗಳಿಗೆ ಸ್ಪಂದಿಸುವುದಷ್ಟೇ ಆಗಿರದೆ ಸಕ್ರಿಯವಾದ ಪಾತ್ರವನ್ನೂ ವಹಿಸುತ್ತದೆ. ಆದ್ದರಿಂದಲೇ, ವಿಶ್ವವಿದ್ಯಾನಿಲಯವು ಕಲಿಕಾರ್ಥಿಗಳ ಅವಶ್ಯಕತೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸುವುದರ ಜೊತೆಗೆ ಮುಂದಿನ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶಾತಿ ಬಯಸಿ ಮಾಹಿತಿ ಕೋರುವ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲು ಪೂರ್ಣ ಪ್ರಮಾಣದ ಕಲಿಕಾರ್ಥಿ ಕಲ್ಯಾಣ ಕೇಂದ್ರವನ್ನು ಸ್ಥಾಪಿಸಿದೆ. ಶೈಕ್ಷಣಿಕ ಆಪ್ತ ಸಮಾಲೋಚನೆ, ವಿದ್ಯಾರ್ಥಿಗಳು ಕೋರುವ ಮಾಹಿತಿಗಳನ್ನು ಸಕಾಲದಲ್ಲಿ ಒದಗಿಸುವುದು, ಕುಂದುಕೊರತೆಗಳನ್ನು ನಿವಾರಿಸುವುದು, ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರ ಮುಖಾಂತರ ಕಲಿಕಾರ್ಥಿಗಳ ಕಲ್ಯಾಣವನ್ನು ಖಾತ್ರಿಗೊಳಿಸಲು ವಿಶ್ವವಿದ್ಯಾನಿಲಯವು ಬಯಸುತ್ತದೆ. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಉತ್ತಮವಾದ ಶೈಕ್ಷಣಿಕ ಅನುಭವಗಳನ್ನು ಪಡೆಯಲು ಮತ್ತು ಆ ಮುಖಾಂತರ ವಿಶ್ವವಿದ್ಯಾನಿಲಯದ ರಾಯಭಾರಿಯಾಗಿ ಮುಂದೆ ರೂಪುಗೊಳ್ಳಲು ಉತ್ಕøಷ್ಟವಾದ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಲು ಇಚ್ಚಿಸುತ್ತದೆ. ಕಲಿಕಾರ್ಥಿಗಳಿಗೆ ವಿವಿಧ ರೂಪಗಳಲ್ಲಿ ಬೆಂಬಲವನ್ನು ನೀಡುತಿದ್ದು, ಅವುಗಳು ಈ ಕೆಳಕಂಡಂತಿವೆ:

• ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ನೀಡುವ ಸಹಾಯ

• ಶೈಕ್ಷಣಿಕ ಕಾರ್ಯಕ್ರಮಗಳಿಗೆ ಈಗಾಗಲೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ನೀಡುವ ಸಹಾಯ

• ಹಳೆ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಬೆಂಬಲ

• ಕುಂದುಕೊರತೆಗಳ ನಿವಾರಿಸುವುದಕ್ಕೆ ನೀಡುವ ಸಹಾಯ

ಕಲಿಕಾರ್ಥಿಗಳ ಕಲ್ಯಾಣ ಕೇಂದ್ರದ ಮುಖ್ಯಸ್ಥರಾಗಿ ನಿರ್ದೇಶಕರು ಆಡಳಿತಾತ್ಮಕ ಸಿಬ್ಬಂದಿಗಳಾದ ಸಹಾಯಕ ಕುಲಸಚಿವರು ಮತ್ತು ಇತರರ ನೆರವಿನಿಂದ ಕಾರ್ಯನಿರ್ವಹಿಸುತ್ತಾರೆ. ಈ ಕೇಂದ್ರವು ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗ, ವಿಶ್ವವಿದ್ಯಾನಿಲಯ ಮತ್ತು ಭಾಗಿದಾರರ ನಡುವೆ ಸಮನ್ವಯ ತರಲು ಕಾರ್ಯನಿರ್ವಹಿಸುತ್ತದೆ.

ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮಾಹಿತಿಯನ್ನು ಅರಸಿ ಬರುವ ಮತ್ತು ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಲು ವಿದ್ಯಾರ್ಥಿಗಳು ಕಲಿಕಾರ್ಥಿ ಕಲ್ಯಾಣ ಕೇಂದ್ರದಡಿಯಲ್ಲಿ ಕಾರ್ಯನಿರ್ವಹಿಸುವ ಸಹಾಯ ವಾಣಿಯನ್ನು ಸಂಪರ್ಕಿಸಲು ಕೋರಿದೆ. ಸಹಾಯವಾಣಿ ಸಂಖ್ಯೆ: +91-8690544544. E-mail: ksoulwc@gmail.com and directorlwcksou@gmail.com

ದೃಷ್ಟಿ

• ಅತ್ಯುತ್ತಮ ಕಲಿಯುವವರ ಬೆಂಬಲ ರಚನೆಗಳನ್ನು ರಚಿಸಲು, ಸುಗಮಗೊಳಿಸಲು ಮತ್ತು ಪೋಷಿಸಲು ಮತ್ತು ಸಮಗ್ರ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುವ ಸೇವೆಗಳು ಕಲಿಯುವವರು

ಮಿಷನ್

ವಿಶ್ವವಿದ್ಯಾನಿಲಯದ ಕಲಿಕಾ ಕಲ್ಯಾಣ ಕೇಂದ್ರಕ್ಕೆ ಈ ಕೆಳಗಿನ ಮಿಷನ್‌ಗಳಿಂದ ತಿಳಿಸಲಾಗಿದೆ. ಅವರು ಗುರಿಯನ್ನು ಹೊಂದಿದೆ:

• ಕಲಿಯುವವರ ಕುಂದುಕೊರತೆಗಳನ್ನು ಗುರುತಿಸಿ: ಅವರ ಸ್ವಭಾವ, ರೂಪಗಳು ಮತ್ತು ಹಂತಗಳು

• ಅನುಸರಿಸುವಲ್ಲಿ ಕಲಿಯುವವರ ಅಗತ್ಯತೆಗಳು ಮತ್ತು ಅನುಭವಗಳನ್ನು ವಿಶ್ಲೇಷಿಸಿ ಮತ್ತು ಪರಿಹರಿಸಿ ವಿಶ್ವವಿದ್ಯಾಲಯದಿಂದ ಶೈಕ್ಷಣಿಕ ಕಾರ್ಯಕ್ರಮಗಳು.

• ಕಲಿಯುವವರ ಸೂಕ್ಷ್ಮ, ಪ್ರವೇಶಿಸಬಹುದಾದ, ಕೈಗೆಟುಕುವ ಮತ್ತು ಸಮಯೋಚಿತ ರಚನೆಗಳನ್ನು ರಚಿಸಿ, ಪ್ರವೇಶದ ಹಂತದಿಂದ ಹಂತದವರೆಗೆ ಕಲಿಯುವವರಿಗೆ ಅಭ್ಯಾಸಗಳು ಮತ್ತು ಸೇವೆಗಳು ಪರೀಕ್ಷೆಗಳು ಮತ್ತು ಪ್ರಮಾಣಪತ್ರಗಳನ್ನು ಸ್ವೀಕರಿಸುವುದು

• ವಿವಿಧ ನಡುವೆ ಸಮನ್ವಯವನ್ನು ಸುಲಭಗೊಳಿಸಲು ಅಧಿಕಾರಿಗಳಿಗೆ ಸಲಹೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು

2023-24 ರಿಂದ 2027-28 ರವರೆಗಿನ ಅವಧಿಗೆ KSOU ನ ಕೋರ್ಸ್‌ಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ಹೊಸ-ದೆಹಲಿಯಿಂದ ಗುರುತಿಸಲಾಗಿದೆ.

ಈ ವೆಬ್‌ಸೈಟ್‌ನಲ್ಲಿರುವ ಎಲ್ಲಾ ವಿಷಯಗಳನ್ನು ಕರಾಮುವಿ,ಮೈಸೂರು ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಲಿಖಿತ ಒಪ್ಪಿಗೆಯಿಲ್ಲದೆ ಯಾವುದೇ ಮಾಧ್ಯಮದಲ್ಲಿ ನಕಲಿಸಬಾರದು ಅಥವಾ ಬಳಸಬಾರದು. * Copyrights © 2022 KSOU Mysuru. All rights reserved.